ಅಭಿಮಾನಿಗಳಿಂದ ಅಶ್ರುತರ್ಪಣ
ಪಾರ್ವತಮ್ಮ ರಾಜ್ ಕುಮಾರ್ ಇವರಿಬ್ಬರ ಪ್ರೇಮದ ಕಾಣಿಕೆ ಯಾಗಿ ಅಪ್ಪು ನೀ ದೊಡ್ಮನೆ ಹುಡುಗ ನಾಗಿ ಜನಿಸಿ ಭಾಗ್ಯವಂತ ನಾದೆ. ಬೆಟ್ಟದ ಹೂ ವಂತೆ ಬಿಂದಾಸ್ ಆಗಿ ಅರಳಿ ಪೃಥ್ವಿ ತುಂಬಾ ಪರಿಮಳ ಬೀರಿದೆ. ಅರಸು ವಂಶಿ ಯಾಗಿ ಅಜೇಯ, ವೀರ ಕನ್ನಡಿಗ ನಾಗಿ ಎಲ್ಲರ ಮನದೊಳಗೂ ಪ್ರೀತಿಯ ಮೈತ್ರಿ ಮಾಡಿಕೊಂಡು , ಅಭಿಮಾನಿ ಹುಡುಗರು ಗಳನ್ನೆಲ್ಲ ಸಂಪಾದಿಸಿಕೊಂಡು ವಿಧಿಯ ಚಕ್ರವ್ಯೂಹ ದಲ್ಲಿ ಸಿಲುಕಿ ಯಾರೇ ಕೂಗಾಡಲಿ ಎನ್ನುತ್ತಾ ಎರಡು ನಕ್ಷತ್ರ ಗಳಂತಹ ಕಣ್ಣುಗಳನ್ನು ಶಿವ ಮೆಚ್ಚಿದ ಕಣ್ಣಪ್ಪ ನಂತೆ ದಾನಮಾಡಿ ಚಲಿಸುವ ಮೋಡಗಳು ದಾರಿಮಾಡಿಕೊಟ್ಟಂತೆ , ಆಕಾಶ ಮಾರ್ಗದಿ ಪರಮಾತ್ಮ ನ ಪಾದ ಸೇರಿದ ರಣವಿಕ್ರಮ ಯುವರತ್ನ ನಿಮಗಿದೋ ಅಸಂಖ್ಯಾತ ಮನಗಳ ಭಾರವಾದ ಹೃದಯದ ಅಶ್ರುತರ್ಪಣ.