23 C
Hubli
ಮಾರ್ಚ್ 19, 2024
eNews Land
ರಾಜ್ಯ ಸಿನೆಮಾ

ಪುನೀತ್ ರಾಜಕುಮಾರ್ ನಿಧನಕ್ಕೆ ಡಾ. ಡಿ.ವಿರೇಂದ್ರ ಹೆಗ್ಗಡೆ ಕಂಬನಿ

ರಾಜಕುಮಾರ್ ನಿಧನಕ್ಕೆ ಡಾ. ಡಿ.ವಿರೇಂದ್ರ ಹೆಗ್ಗಡೆ ಕಂಬನಿಮಿಡಿದರು.
ಸಣ್ಣ ವಯಸ್ಸಿನ ನಟನ ನಿಧನ ಸುದ್ದಿ ಕೇಳಿದ ತಕ್ಷಣವೇ ದಿಗ್ಭ್ರಾಂತಿ ಆಯಿತು. ವಿಷಯ ಸುಳ್ಳಾಗಲಿ, ಚಿಕಿತ್ಸೆ ಸ್ಪಂದಿಸಿ ಚೇತರಿಕೆ ಕಾಣುವಂತಾಗಲಿ ಎಂದು ಮಂಜುನಾಥನಲ್ಲಿ ಪ್ರಾರ್ಥಿನಿಸಿದೆ. ನಿರೀಕ್ಷೆಗಳನ್ನು ಹುಸಿಯಾಗಿ ನಿಧನದ ಸುದ್ದಿ ನಿಜವಾಗಿದೆ. ಪುನೀತ್ ಹಾಗೂ ಅವರ ತಂದೆ ಧರ್ಮಸ್ಥಳದ ಮಂಜುನಾಥ ಭಕ್ತರಾಗಿದ್ದರು. ವೈಯಕ್ತಿಕವಾಗಿ ನನಗೂ ಪರಿಚಯಿಸ್ಥರು. ಕಲಾಕ್ಷೇತ್ರದಲ್ಲಿ ದೊಡ್ಡ ಶೂನ್ಯ ಆವರಿಸಿದೆ. ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು. ಸಭೆಯಲ್ಲಿ ಮೃತರ ಗೌರವಾರ್ಥ ಎರಡು ನಿಮಿಷಗಳ ಮೌನಾಚರಣೆ ಆಚರಿಸಲಾಯಿತು.

ಕರ್ನಾಟಕ ರಾಜ್ಯ ರೇಷ್ಮೇ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಜನಜಾಗೃತಿ ವೇದಿಕೆ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಧಾರವಾಡ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಧಾರವಾಡ ರುಡ್ಸೆಟ್ ಸಂಸ್ಥೆ ನಿರ್ದೇಶಕ ಗವಿಸಿದ್ದಪ್ಪ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದಿಂದ ದುಶ್ಚಟ ಮುಕ್ತ ಸಮಾಜದ ನಿರ್ಮಾಣ ಉದ್ದೇಶದಿಂದ 1992 ರಲ್ಲಿ ಜನಜಾಗೃತಿ ವೇದಿಕೆಯನ್ನು ಸ್ಥಾಪಿಸಲಾಗಿದೆ. ಇದುವರೆಗೆ 1475 ಸಮುದಾಯ ವಿಶೇಷ ಮದ್ಯವರ್ಜನ ಶಿಬಿರಗಳನ್ನು ನಡೆಸಿ 1.25 ಲಕ್ಷ ವ್ಯಸನಿಗಳನ್ನು 8‌ ದಿನಗಳ ಮನಃ ಪರಿವರ್ತನೆ ಬೋಧನೆ ಮತ್ತು ಚಿಕಿತ್ಸೆ ಮೂಲಕ ವ್ಯಸನ ಮುಕ್ತರನ್ನಾಗಿಸಿದೆ. ಪಲಾನುಭವಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.

 

Related posts

ಕೋವಿಡ್ ಸಂಕಷ್ಟದ ನಂತರ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ : ಸಿಎಂ

eNewsLand Team

ಜ.21 ದಾಸೋಹ ದಿನಾಚರಣೆ

eNEWS LAND Team

ಸಿದ್ದರಾಮಯ್ಯರ ಸರಕಾರ ದಲಿತ ವಿರೋಧಿ: ಗೋವಿಂದ ಕಾರಜೋಳ

eNewsLand Team