30 C
Hubli
ನವೆಂಬರ್ 4, 2024
eNews Land
ರಾಜ್ಯ ಸಿನೆಮಾ

ಪುನೀತ್ ರಾಜಕುಮಾರ್ ನಿಧನಕ್ಕೆ ಡಾ. ಡಿ.ವಿರೇಂದ್ರ ಹೆಗ್ಗಡೆ ಕಂಬನಿ

ಜೀವನ ಕಟ್ಟಿಕೊಳ್ಳಲು ಅವಕಾಶಗಳ ನಿರ್ಮಾಣ ಮಾಡುವುದು ಮಹತ್ವದ ಕಾರ್ಯವಾಗಿದೆ

ಡಾ. ಡಿ.ವಿರೇಂದ್ರ ಹೆಗ್ಗಡೆ

ಹುಬ್ಬಳ್ಳಿ.ಅ.29: ಹಣ ಸೇರಿದಂತೆ ಇತರೆ ದಾನಗಳನ್ನು ಮಾಡುವುದಕ್ಕಿಂತ ಬಡವರು, ನೊಂದವರಿಗೆ ಜೀವನ ಕಟ್ಟಿಕೊಳ್ಳಲು ಅವಕಾಶಗಳ ನಿರ್ಮಾಣ ಮಾಡುವುದು ಮಹತ್ವದ ಕಾರ್ಯವಾಗಿದೆ ಎಂದು ಧರ್ಮಸ್ಥಳ ಶ್ರೀ ಮಂಜುನಾಥ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಪರಮಪೂಜ್ಯ ಡಾ. ಡಿ.ವಿರೇಂದ್ರ ಹೆಗ್ಗಡೆ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಹಾಗೂ ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಧಾರವಾಡದ ರಾಯಪುರದಲ್ಲಿನ, ಜ್ಞಾನವಿಕಾಸ ತರಬೇತಿ ಕೇಂದ್ರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪಾನ ಮುಕ್ತರಿಗೆ ರಾಜ್ಯವ್ಯಾಪಿ ಸ್ವ ಉದ್ಯೋಗ ತರಬೇತಿ ಕಾರ್ಯಗಾರ ಹಾಗೂ ಸ್ವ ಉದ್ಯೋಗ ನಿರಂತರ ಸಾಧನಾ ಸಮಾವೇಶದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆಗಳು ಶ್ರೀ ಮಂಜುನಾಥ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಎರಡು ಪ್ರತ್ಯೇಕ ದಾರಿಗಳು. ಒಂದು ಎಡ ಬದಿಯಲ್ಲಿ ಚಲಿಸಿದರೆ ಇನ್ನೊಂದು ಬಲ ಬದಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಎರಡು ಸಂಸ್ಥೆಗಳು ಪ್ರಗತಿಯ ಹಾದಿಯಲ್ಲಿವೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ರಾಜ್ಯದ 42 ಲಕ್ಷ ಕುಟುಂಬ ಜೋಡಣೆಯಾಗಿವೆ. ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಕೂಡ ಸಂಸ್ಥೆಯ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಪ್ರಶಂಸಿದೆ. ದೇಶದಲ್ಲಿ 560 ಕ್ಕೂ ಹೆಚ್ಚು ರುಡ್ಸೆಟ್ ತರಬೇತಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸಂಸ್ಥೆ ಚಟುವಟಿಕೆಗಳಿಂದ ಮಹಿಳೆಯರ ಜೀವನದಲ್ಲಿ ಪರಿವರ್ತನೆ ತರಲಾಗಿದೆ. ಬಡತನ ಹಾಗೂ ಅಜ್ಞಾನದ ಬದುಕಿಗೆ ಮುಕ್ತಿ ಹಾಡಲಾಗಿದೆ. ಇಂದಿನ ಜೀವನ ಮಟ್ಟದ ವೆಚ್ಚ ಹೆಚ್ಚಾಗಿದೆ. ಸ್ವ ಉದ್ಯೋಗ ಹಾಗೂ ಉಪಕಸುಬುಗಳು ಈ ವೆಚ್ಚವನ್ನು ಭರಿಸಲು ಸಹಾಯಕವಾಗಿವೆ. ದುಶ್ಚಟಗಳು ಜೀವಕ್ಕೆ ಹಾಗೂ ಜೀವನಕ್ಕೆ ಅಪಾಯಕಾರಿ. ಆರ್ಥಿಕ ನಷ್ಟ ಉಂಟುಮಾಡುವ ಹವ್ಯಾಸಗಳು ಹಾನಿಕಾರಕಾವಾಗಿವೆ. ಕುಡಿತ ಚಟದಿಂದ ಮುಕ್ತರಾದವರು ಹೆಂಡತಿ ಹಾಗೂ ಮಕ್ಕಳ ಪ್ರೀತಿ ಪಾತ್ರರಾಗಿದ್ದಾರೆ. ಅಪ್ಪನಿಂದ ಮಕ್ಕಳಿಗೆ ಕುಡಿತ ಚಟ ಹತ್ತಿದೆ ಉದಾಹರಣೆಗಳಿವೆ. ದುಶ್ಚಟಗಳ ದಾಸರಾದರೆ ಬಿಡುವುದು ಕಷ್ಟ. ಮದ್ಯ ವರ್ಜನೆ ತರಬೇತಿ ಪಾಲ್ಗೊಂಡು ಮದ್ಯ ವ್ಯಸನ ಮುಕ್ತರಾದವರು ಹೊಸ ಜೀವನ ಹಾಗೂ ಜನ್ಮಕ್ಕೆ ಕಾಲಿಟ್ಟಿದ್ದೀರಿ. ಹೊಸ ಜೀವನವನ್ನು ಮುಂದುವರಿಸಿಕೊಂಡು ಹೋಗಿವಂತೆ ಕಿವಿ ಮಾತು ಹೇಳಿದರು.

ಪುನೀತ್ ರಾಜಕುಮಾರ್ ನಿಧನಕ್ಕೆ ಸಂತಾಪ ಸೂಚನೆ

ಹೃದಯಾಘಾತದಿಂದ ಮೃತರಾದ ನಟ ಪುನೀತ್

Related posts

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟ ASRTU ನೀಡುವ “HERO’S ON THE ROAD” ರಾಷ್ಟ್ರಮಟ್ಟದ ಪ್ರಶಸ್ತಿ ಯಾರಿಗೆ?

eNEWS LAND Team

ಕೇಂದ್ರದಲ್ಲಿ ಸ್ಪಂದನಾಶೀಲ ಸರ್ಕಾರವಿದೆ: ಸಿಎಂ ಬೊಮ್ಮಾಯಿ

eNEWS LAND Team

ರಾಜ್ಯದ ಯಶೋಗಾಥೆಯಲ್ಲಿ ಭಾಗಿಯಾಗಿ: ಹೂಡಿಕೆದಾರರಿಗೆ ಮುಖ್ಯಮಂತ್ರಿ ಆಹ್ವಾನ

eNewsLand Team