ಇಎನ್ಎಲ್ ಫಿಲ್ಮ್ ಡೆಸ್ಕ್
ಡಿಸೆಂಬರ್ 10ರಂದು ಬ್ರೇಕ್ ಫೇಲ್ಯೂರ್ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ಚಿತ್ರದ ಸಹ ನಿರ್ಮಾಪಕ ಪ್ರಕಾಶ ಬನ್ನಿಗೋಳ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಬ್ರೇಕ್ ಫೇಲ್ಯೂರ್ ಚಿತ್ರ ಇದು ಅರಣ್ಯ ಜೀವನದ ಕುರಿತು ಇರುವ ಕಥೆ ಸಂಬಂಧ, ಭಾವನೆ, ಆಧುನಿಕ ಜೀವನದ ಸಾಕಷ್ಟು ಅಂಶಗಳು ಚಿತ್ರದಲ್ಲಿ ಇದೆ ಎಂದರು.
ಚಿತ್ರವನ್ನು ಅಬ್ದುಲ್ ಗಣಿ ತಾಳಿಕೋಟಿ ನಿರ್ಮಿಸಿದ್ದು.
ಆದಿತ್ಯ ನವೀನ್ ನಿರ್ದೆಶನ ಮಾಡಿದ್ದಾರೆ. ಹಾಗೂ ಯುವಕರ ತಂಡ ಎಂಜಾಯ್ಮೆಂಟಿಗೆ ಹೊರ ಸ್ಥಳಕ್ಕೆ ಹೋದಾಗ ಮತ್ತು ಅಲ್ಲಿಆಗುವ ಅವಗಡ ಗಳು ಇಂತಹ ಅನೇಕ ಘಟನೆಗಳ ಕುರಿತು ಯುವ ಜನತೆಗೆ ಜಾಗೃತಿ ಮುಡಿಸುವ ಸಂದೇಶವನ್ನು ಹೊಂದಿರುವಂತ ಮತ್ತು ಮುಖ್ಯವಾಗಿ ಉತ್ತರ ಕರ್ನಾಟಕದ ಅದರಲ್ಲಿ ಹುಬ್ಬಳ್ಳಿಯ ಅನೇಕ ಪ್ರತಿಭಾವಂತ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ ಹುಬ್ಬಳ್ಳಿ ಕಲಾವಿದರನ್ನು ,ಅವರ ಕಲೆಯನ್ನು ಬೆಂಬಲಿಸಬೇಕು ಎಂದರು.
ಚಿತ್ರದಲ್ಲಿ ನಾಯಕ ನಟನಾಗಿ ನವೀನ , ಸುರೇಶ , ಪ್ರಮೋದ ಬೂಪಣ್ಣ , ಕೃತಿ ಗೌಡ , ಅಂಜಲಿ , ರಿಚಲ್ , ವಿನಯಾ ಹಾಗೂ ರಾಜ್ ಆರ್‌ಎನ್ . ಮತ್ತು ರಾಜ್ ಕೈಜಿ ನಟಿಸಿದ್ದಾರೆ . ಖಳನಾಯಕನ ಪಾತ್ರದಲ್ಲಿ ಮುಖ್ಯ ನಟನಾಗಿ ಉಗ್ರಂ ರವಿ ನಟಿಸಿದ್ದಾರೆ ಎಂದರು. ಚಿತ್ರವನ್ನು ಹುಬ್ಬಳ್ಳಿ ಧಾರವಾಡ , ಹಾಗೂ ದಾಂಡೇಲಿಯ ಅರಣ್ಯದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಎರಡು ಹಾಡುಗಳು ಇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಬ್ದುಲ್‌ಗಣಿ ತಾಳಿಕೋಟಿ ,ಪ್ರೇಮನಾಥ್ ಚಿಕ್ಕತುಂಬಳ್ಳ , ಸುರೇಶ್ ಮುಂಗೊಣಿ . ರಾಜು , ಗೋಪಾಲ್ , ಇದ್ದರು.