23.8 C
Hubli
ಮಾರ್ಚ್ 28, 2023
eNews Land
ರಾಜ್ಯ ಸಿನೆಮಾ

ಪುನೀತಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ

Listen to this article

 

ಇಎನ್ಎಲ್ ಚಿತ್ರದುರ್ಗ :

ಚಿತ್ರದುರ್ಗದ ಮುರುಘಾಮಠ ಕೊಡಮಾಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ನಟ ಪುನೀತ್ ರಾಜ್‍ಕುಮಾರಗೆ ಮರಣೋತ್ತರವಾಗಿ ಘೋಷಿಸಲಾಯಿತು.

ಮುರುಘಾಶ್ರೀ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಪವರ್ ಸ್ಟಾರ್ ಅಪ್ಪು ಗೆ ಬಸವಶ್ರೀ ಪ್ರಶಸ್ತಿ ಪ್ರಕಟಿಸಿದರು.
ಐದು ಲಕ್ಷ ರೂ. ನಗದು ಒಳಗೊಂಡಿರುವ ಬಸವಶ್ರೀ ಪ್ರಶಸ್ತಿಯನ್ನು ಬರುವ ಬಸವ ಜಯಂತಿ ದಿನ ಪ್ರದಾನ ಮಾಡಲಾಗುತ್ತದೆ.

ಮುರುಘಾಮಠದ ಅನುಭವ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ. ಪುನೀತ್ ಪತ್ನಿ ಅಶ್ವಿನಿ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡಲಾಗುವುದು. ಸಹೋದರ ಶಿವರಾಜಕುಮಾರ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುವುದು. ನ.10 ರಂದು ಪುನೀತ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಲಾಗುವುದು ಮುರುಘಾಶ್ರೀಗಳು ಎಂದರು.

Related posts

ಬೂತ್ ವಿಜಯ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

eNewsLand Team

ಮಾಯಾವಿ ಹುಡುಕಾಟಕ್ಕೆ ಹೊರಡಲು ಶಿವಾಜಿ ಸೂರತ್ಕಲ್ ಮುಹೂರ್ತ!

eNewsLand Team

ಧಾರವಾಡದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೈಠಕ್

eNEWS LAND Team