22 C
Hubli
ಸೆಪ್ಟೆಂಬರ್ 11, 2024
eNews Land
ಸಿನೆಮಾ

ಅಪ್ಪು ಕನಸಿನ ‘ಗಂಧದ ಗುಡಿ’ ಟೀಸರ್ ಡಿ.6ಕ್ಕೆ ತೆರೆಗೆ

ಇಎನ್ಎಲ್ ಫಿಲ್ಮ್ ಡೆಸ್ಕ್: ಪುನೀತ್ ರಾಜ್‍ಕುಮಾರ್ ಕಂಡ ಕನಸು ಗಂಧದ ಗುಡಿ ಟೀಸರ್ ಡಿ.6ರಂದು ತೆರೆಗೆ ಬರಲಿದೆ. ಪುನೀತ್ ಪತ್ನಿ ಅಶ್ವಿನಿ ಟ್ವಿಟ್ಟರ್ ಮೂಲಕ ಇದನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ನಿರೀಕ್ಷೆ ಗರಿಗೆದರಿದೆ.

‘ವೈಲ್ಡ್ ಕರ್ನಾಟಕ’ ಡಾಕ್ಯುಮೆಂಟರಿ ಮಾಡಿದ್ದ ಅಮೋಘ ವರ್ಷ ಜತೆ ಸೇರಿ ಪುನೀತ್ ಪಿಆರ್ ಕೆ ಪ್ರಾಡಕ್ಷನ್ ಅಡಿ ಕರುನಾಡ ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಸಿದ್ಧಪಡಿಸಿದ್ದರು. ರಾಜ್ಯದ ನಾನಾಕಡೆಗಳಲ್ಲಿ ಭೇಟಿ ನೀಡಿ ಶೂಟ್ ಮಾಡಲಾಗಿತ್ತು. ಇದಕ್ಕೆ ‘ಗಂಧದಗುಡಿ’ ಎಂದು ಹೆಸರಿಡಲಾಗಿದೆ ಎನ್ನಲಾಗುತ್ತಿದೆ.
ಪುನೀತ್ ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರ ಟೀಸರ್ ನವೆಂಬರ್ 1ರಂದು ರಿಲೀಸ್ ಆಗಬೇಕಿತ್ತು. ನವೆಂಬರ್ 1 ಕನ್ನಡ ರಾಜ್ಯೋತ್ಸವ. ಈ ಕಾರಣಕ್ಕೆ ಅಂದೇ ಆ ಟೀಸರ್ ರಿಲೀಸ್ ಮಾಡಬೇಕು ಎಂದು ಪುನೀತ್ ಕನಸು ಕಂಡಿದ್ದರು. ಅದರ ಬಗ್ಗೆ ತಾವೇ ಬರೆದು ಕೊಂಡಿದ್ದರು. ಆದರೆ, ವಿಧಿ ಯಾರೂ ಬಯಸದ ಆಟವಾಡಿತ್ತು.

ಈ ಕಾರಣಕ್ಕೆ ಆ ಟೀಸರ್ ರಿಲೀಸ್ ಆಗಿಲ್ಲ. ಈಗ ಅದನ್ನು ಡಿ. 6ಕ್ಕೆ ರಿಲೀಸ್ ಮಾಡಲಾಗುತ್ತಿದೆ.
ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ’ ಎಂದು ಅಶ್ವಿನಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

Related posts

ಪುನೀತ್ ರಾಜಕುಮಾರ್ ನಿಧನಕ್ಕೆ ಡಾ. ಡಿ.ವಿರೇಂದ್ರ ಹೆಗ್ಗಡೆ ಕಂಬನಿ

eNEWS LAND Team

ಮಾಯಾವಿ ಹುಡುಕಾಟಕ್ಕೆ ಹೊರಡಲು ಶಿವಾಜಿ ಸೂರತ್ಕಲ್ ಮುಹೂರ್ತ!

eNewsLand Team

ಹುಬ್ಬಳ್ಳಿಯಲ್ಲಿ ಬಡವ ರಾಸ್ಕಲ್ ಹವಾ!!

eNEWS LAND Team