23.3 C
Hubli
ಫೆಬ್ರವರಿ 3, 2023
eNews Land
ಸಿನೆಮಾ

19ಕ್ಕೆ ರಮೇಶ್ ನಿರ್ದೇಶನದ ಫ್ಯಾಮಿಲಿ ಥ್ರಿಲ್ಲರ್‌ 100 ತೆರೆಗೆ

Listen to this article

ರಮೇಶ ಅರವಿಂದ ನಿರ್ದೇಶಿಸಿ, ನಟಿಸಿದ ಚಿತ್ರ

ಇಎನ್ಎಲ್ ಹುಬ್ಬಳ್ಳಿ

ರಮೇಶ್ ಅರವಿಂದ್ ನಟಿಸಿ ನಿರ್ದೇಶಿಸಿದ 100 ಚಲನಚಿತ್ರ ನವೆಂಬರ್ 19 ಕ್ಕೆ ತೆರೆಗೆ ಕಾಣಲಿದೆ.
ರಾಜ್ಯದ 120 ಚಿತ್ರಮಂದಿರಗಳಲ್ಲಿ ಏಕ ಕಾಲದಲ್ಲಿ ಬಿಡುಗಡೆ ಆಗಲಿದೆ.

ನಗರದಲ್ಲಿ ಚಿತ್ರದ ಪ್ರಮೋಶನ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಮೇಶ, ತಂತ್ರಜ್ಞಾನ ಹೆಚ್ಚಿದಂತೆಯೇ ಸೈಬರ್ ಕ್ರೈಂ ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ಮೊಬೈಲ್ ಕೈಗೆ ಬಂದ ನಂತರ ಪ್ರತಿಯೊಬ್ಬರೂ ಬೇರೆ ಬೇರೆ ಲೋಕದಲ್ಲಿ ಇದ್ದಂತೆ ಭಾಸವಾಗ್ತಿದೆ. ವ್ಯಕ್ತಿ ವ್ಯಕ್ತಿಗಳ ನಡುವೆ ಗೋಡೆ ನಿರ್ಮಿಸಿದಂತಾಗಿದೆ. ಇಂತಹ ಲೋಕದಲ್ಲಿ ಸೈಬರ್ ವಂಚನೆಗಳೂ ಹೆಚ್ಚಳವಾಗಿವೆ‌.
ಸಾಮಾಜಿಕ ಜಾಲತಾಣದಿಂದ ವಂಚನೆಗೆ ಒಳಗಾದ ಮಧ್ಯಮ ವರ್ಗದ ಹೋರಾಟದ ರೂಪವಾಗಿ 100 ಚಿತ್ರ ಹೊರಹೊಮ್ಮಿದೆ ಎಂದರು.

ಆ್ಯಕ್ಷನ್, ಥ್ರಿಲ್ಲರ್ ಸಿನೆಮಾ ಇದಾಗಿದ್ದು, ಕುಟುಂಬ ಸಮೇತರಾಗಿ ನೋಡುವಂತಹ ಸಿನೆಮಾ ಮೊದಲು ಕನ್ನಡದಲ್ಲಿ ತೆರೆಗೆ ಬರಲಿದೆ. ಶೀಘ್ರವೇ ತೆಲುಗು ಅವತರಣಿಕೆಯೂ ಬಿಡುಗಡೆಗೊಳ್ಳಲಿದೆ ಎಂದರು.
ಡಿಸೆಂಬರ್ ತಿಂಗಳಲ್ಲಿ ಶಿವಾಜಿ ಸೂರತ್ಕಲ್ ಸಿನಿಮಾದ 2ನೇ ಅವತರಣಿಕೆ‌ ಚಿತ್ರೀಕರಣ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಹಾರರ್ ಚಲನಚಿತ್ರಗಳನ್ನು ಮಾಡುವ ಮನಸ್ಸಿದೆ ಎಂದರು.
100 ಸಿನಿಮಾದ ನಿರ್ಮಾಪಕ ಎಂ.ರಮೇಶರೆಡ್ಡಿ‌ ಮಾತನಾಡಿ ಜನತೆ ಥಿಯೇಟರ್ ಗೆ ಬಂದು ಸಿನಿಮಾ ನೋಡುವಂತೆ ಕೇಳಿಕೊಂಡರು.

Related posts

ಡಾರ್ಲಿಂಗ್ ಕೃಷ್ಣ “ದಿಲ್ ಪಸಂದ್” ಫಸ್ಟ್ ಲುಕ್ ಸೂಪರ್!

eNewsLand Team

ಕಿಯಾರಾ ಹೊಸ ಬೋಲ್ಟ್ ಲುಕ್ಕಿಗೆ ಹುಡುಗರ ಹಾರ್ಟ್ ಕ್ರ್ಯಾಶ್!!

eNewsLand Team

ಮಾಯಾವಿ ಹುಡುಕಾಟಕ್ಕೆ ಹೊರಡಲು ಶಿವಾಜಿ ಸೂರತ್ಕಲ್ ಮುಹೂರ್ತ!

eNewsLand Team