28.5 C
Hubli
ಏಪ್ರಿಲ್ 30, 2024
eNews Land
ಬ್ರೇಕಿಂಗ್ ಸುದ್ದಿ

ಜೀವದ ಹಂಗು ತೊರೆದು ಮಹಿಳೆಯ ಪ್ರಾಣ ಕಾಪಾಡಿದವನಿಗೆ ಪ್ರಶಂಸಾ ಪತ್ರ, ಸನ್ಮಾನ, ಶೌರ್ಯ ಪ್ರಶಸ್ತಿ ಶಿಫಾರಸ್ಸು: ಜಿಲ್ಲಾ ಪೊಲೀಸ್ ಅಧೀಕ್ಷಕ ಲೋಕೇಶ್ ಜಗಲಾಸರ್

ಇಎನ್ಎಲ್ ಧಾರವಾಡ/ಕಲಘಟಗಿ: ಪಟ್ಟಣದ ಮಹಿಳೆಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡುತ್ತಿದ್ದ ವ್ಯಕ್ತಿಯನ್ನು ತಡೆದು, ಮಹಿಳೆಯನ್ನು ರಕ್ಷಿಸಿದ ವ್ಯಕ್ತಿಯನ್ನು, ಧಾರವಾಡ ಜಿಲ್ಲೆಯ ಪೊಲೀಸರು ಪ್ರಶಂಸಾ ಪತ್ರವನ್ನು ನೀಡಿ ಸನ್ಮಾನಿಸಿದ್ದಾರೆ.

ಮೈಮೇಲೆ ಗಾಯಗಳಾದರೂ ಲೆಕ್ಕಿಸದೇ ಹಲ್ಲೆಗಾರನನ್ನು ತಡೆದಿರುವ ಕಲಘಟಗಿಯ ರುಸ್ತುಂಅಲಿ ಮಿಠಾಯಿಗಾರ ಇವರ ಧೈರ್ಯ ಮತ್ತು ನಾಗರಿಕ ಪ್ರಜ್ಞೆಯನ್ನು ಮೆಚ್ಚಿ… ಜಿಲ್ಲಾ ಶೌರ್ಯ ಪ್ರಶಸ್ತಿ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ. ಧಾರವಾಡ ಜಿಲ್ಲೆಯ ಪೊಲೀಸ್ ಅಧೀಕ್ಷಕ ಲೋಕೇಶ್ ಜಗಲಾಸರ್ ಪ್ರಶಂಸಾ ಪತ್ರವನ್ನು ನೀಡಿದ್ದಾರೆ. ಈ ವೇಳೆ ಕಲಘಟಗಿ ಸಿಪಿಐ ಶ್ರೀಶೈಲ ಕೌಜಲಗಿ ಇದ್ದರು.

Related posts

ಅಣ್ಣಿಗೇರಿ ಪಟ್ಟಣದಲ್ಲಿ ಶ್ರೀ ಅಮೃತೇಶ್ವರ ದೇವಸ್ಥಾನದ ಸಮೀಪದಲ್ಲಿ ಇರುವ ತೆಂಗಿನಮರಕ್ಕೆ ಸಿಡಿಲು ಬಿದ್ದು ಬೆಂಕಿ ಹೊತ್ತಿದ ದೃಶ್ಯ ನೋಡಿ…!

eNEWS LAND Team

₹1ಕೋಟಿ ಮೌಲ್ಯದ 400ಮೊಬೈಲ್ ಪತ್ತೆ ಮಾಡಿ ಸಾರ್ವಜನಿಕರಿಗೆ ತಲುಪಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸರು!!!

eNEWS LAND Team

ಹತ್ತು ಸಾವಿರ ವರ್ಷದ ಹಳೆಯ ತ್ರಿಶೂಲ, 3 ಸಾವಿರ ವರ್ಷದ ವಜ್ರಾ [ವಜ್ರಾಯುಧ] ಪತ್ತೆ : ಇದೇ ಮೊದಲ ಬಾರಿಗೆ ಭಾರತೀಯರ ಮುಂದೆ ಅನಾವರಣ

eNEWS LAND Team