30 C
Hubli
ಮಾರ್ಚ್ 19, 2024
eNews Land
ಕೃಷಿ

ರೈತರಿಗೆ ಆಸರೆಯಾದ ಪಿಎಂ ಫಸಲ ಬೀಮಾ ಯೋಜನೆ: ಕಟ್ಟೇಗೌಡರ

ಇಎನ್ಎಲ್ ಕಲಘಟಗಿ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಮುಂಗಾರು-2022 ಯೋಜನೆಯನ್ನು ಪರಿಷ್ಕೃತ ಮಾರ್ಗಸೂಚಿಯನ್ವಯ ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರವು ಮಂಜೂರಾತಿ ನೀಡಲಾಗಿದೆ ಎಂದು ಕೃಷಿ ವಿಸ್ತರಣಾ ಅಧಿಕಾರಿ ಎನ್.ಎಫ್.ಕಟ್ಟೇಗೌಡರ ಪ್ರಕಟಣೆಗೆ ತಿಳಿಸಿದ್ದಾರೆ.

    ಸಾಲ ಪಡೆಯುವ ಮತ್ತು ಸಾಲ ಪಡೆದ ರೈತರಿಗೆ ಇತರೆ ಎಲ್ಲ ಬೆಳೆಗಳಿಗಾಗಿ ಜುಲೈ 31, ಕೆಂಪು ಮೆಣಸಿನಕಾಯಿ(ನೀರಾವರಿ ಹಾಗೂ ಮಳೆಆಶ್ರಿತ) ಬೆಳೆಗೆ ಆಗಸ್ಟ್ 16 ಕೊನೆಯ ದಿನಾಂಕಗಳಾಗಿರುತ್ತವೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಬೆಳೆವಾರು ಬೆಳೆಸಾಲದ ಪ್ರಮಾಣದ(Scale of Finance) ಆಧಾರದ ಮೇಲೆ ನಿರ್ಧರಿಸಲಾಗಿದೆ. ಸದರಿ ಈ (Reavamped PMFBY) ಮಾರ್ಗಸೂಚಿಗಳನ್ವಯ ಬ್ಯಾಂಕಿನಲ್ಲಿ ಬೆಳೆಸಾಲ ಮಂಜೂರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಲ್ಲಿ ಒಳಪಡಿಸಲಾಗುವುದು. ಬೆಳೆಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛೆ ಪಡದೇ ಇದ್ದಲ್ಲಿ ಬ್ಯಾಂಕ್ ವ್ಯವಸ್ಥಾಪಕರಿಗೆ ಬೆಳೆ ನೊಂದಣಿಯ ಅಂತಿಮ ದಿನಾಂಕಕ್ಕಿoತ 7ದಿನ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈ ಬಿಡಲಾಗದು.

ಬೆಳೆವಿಮಾ ಕಂತನ್ನು ತುಂಬಲು ಮುಂಗಾರು ಹಂಗಾಮಿನ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಳೆಯಾಶ್ರಿತ ಭತ್ತ ಮತ್ತು ಮುಸುಕಿನ ಜೋಳಕ್ಕೆ ಜುಲೈ 31, ಇದೇ ಮುಂಗಾರು ಹಂಗಾಮಿನ ಹೋಬಳಿ ಮಟ್ಟದಲ್ಲಿ ನೀರಾವರಿ ಆಶ್ರಿತ ಭತ್ತ, ಮುಸುಕಿನ ಜೋಳ ಹಾಗೂ ಮಳೆಆಶ್ರಿತವಾದ ಸೋಯಾ, ಅವರೆ, ಹತ್ತಿ, ತೊಗರಿ, ನೆಲಗಡಲೆ(ಶೇಂಗಾ), ಸಾವೆ ಈ ಬೆಳೆಗಳಿಗೆ ಜುಲೈ 31 ಕೊನೆ ದಿನವಾಗಿರುತ್ತದೆ. ಆದ್ದರಿಂದ ರೈತರು ಇನ್ನೂ ದಿನವಿದೆ ಎಂದು ದಾರಿ ಕಾಯದೇ ಆದಷ್ಟು ಬೇಗನೆ ನಿಮಗೆ ಸಂಬoಧಿಸಿದ ಬೆಳೆಗಳಿಗೆ ನಿಗದಿತ ವಿಮಾ ಕಂತನ್ನು ಪಾವತಿಸಿ ಬೆಳೆವಿಮಾ ಯೋಜನೆಯನ್ನು ಅನುಷ್ಟಾನಗೊಳಿಸಲು ರೈತರಿಗೆ ಈ ಮೂಲಕ ವಿನಂತಿಸಿರುತ್ತಾರೆ.
ಆದ್ದರಿಂದ ರೈತಭಾಂದವರು ತಮಗೆ ಸಂಭoದಿಸಿದ ರೈತ ಸಂಪರ್ಕ ಕೇಂದ್ರ ಅಧಿಕಾರಿ/ಸಿಬ್ಬಂದಿ, ಐಸಿಐಸಿಐ ಲಂಬಾರ್ಡ ಜನರಲ್ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿ ನಿಂಗಪ್ಪ ತಾವರಗೇರಿ(+91 97431 11618) ಅಥವಾ ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಕಛೇರಿಗೆ ನೇರವಾಗಿ ಸಂಪರ್ಕಿಸಲು ಕೋರಲಾಗಿದೆ.

Related posts

ಕಡಲೆ ಖರೀದಿ ಕೇಂದ್ರ ತೆರೆಯಲು ಆಗ್ರಹ: ಪ್ರಕಾಶ ಅಂಗಡಿ

eNEWS LAND Team

ಮಲಪ್ರಭಾ ಮಹಾದಾಯಿ ರೈತ ಹೋರಾಟ ಒಕ್ಕೂಟ ಬಂದ್‍ಗೆ ಬೆಂಬಲ.

eNEWS LAND Team

ಹುಬ್ಬಳ್ಳಿ: ಎಪಿಎಮ್’ಸಿ ಯ ನೂತನ ಕಾರ್ಯದರ್ಶಿಗೆ ವ್ಯಾಪಾರಸ್ಥರ ಸಂಘದಿoದ ಸನ್ಮಾನ

eNEWS LAND Team