ಇಎನ್ಎಲ್ ಧಾರವಾಡ:ಪಿ.ಎಮ್.ಕಿಸಾನ್ ಯೋಜನೆಯಡಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆಧಾರ ಜೋಡಣೆಯಾಗದ ಕಾರಣ ಸಹಾಯಧನ ವರ್ಗಾವಣೆಯಾಗದೇ ಇರುವ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಆರ್ಥಿಕ ನೆರವು ಒದಗಿಸಲು ಕೃಷಿ ಇಲಾಖೆ, ಸಹಕಾರ ಇಲಾಖೆ ಹಾಗೂ ಸ್ಥಳೀಯ ಬ್ಯಾಂಕುಗಳ ಸಮನ್ವಯದಲ್ಲಿ ಫೆ.21 ರಿಂದ 25 ರವರೆಗೆ ವಿಶೇಷ ಆಂದೋಲನ ಏರ್ಪಡಿಸಿ ರೈತರ ಬ್ಯಾಂಕ್ ಖಾತೆಗಳಿಗೆ ಆಧಾರ ಜೋಡಣೆ ಮಾಡಿಸಿ ಎನ್‍ಪಿಸಿಐ ಮಾಡಿಸಲು ಚಾಲನೆ ನೀಡಲಾಗಿರುತ್ತದೆ.
ಆಂದೋಲನದ ಭಾಗವಾಗಿ ಆಧಾರ ಜೋಡಣೆಯಾಗದ ಎಲ್ಲ ರೈತ ಫಲಾನುಭವಿಗಳ ಹೆಸರನ್ನು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರದರ್ಶಿಸಲಾಗಿರುತ್ತದೆ. ಧಾರವಾಡ-446, ಹುಬ್ಬಳ್ಳಿ-335, ಕಲಘಟಗಿ-221, ಕುಂದಗೋಳ-331, ಮತ್ತು ನವಲಗುಂದ-454 ಒಟ್ಟು 1787 ರೈತ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ಆಧಾರ ಜೋಡಣೆಯಾಗದ ಕಾರಣ ಯೋಜನೆಯ ಮೊತ್ತ ಪಾವತಿಸಲು ಸಾಧ್ಯವಾಗಿರುವುದಿಲ್ಲ, ಆದ್ದರಿಂದ ಆಧಾರ ಜೋಡಣೆಯಾಗದ, ಪಟ್ಟಿಯಲ್ಲಿರುವ ರೈತ ಭಾಂದವರು ತಮ್ಮ ಬ್ಯಾಂಕ್ ಗಳಿಗೆ ಭೇಟಿ ನೀಡಿ ಆಧಾರ ಸೀಡಿಂಗ್ ಮತ್ತು ಎನ್‍ಪಿಸಿಐ ಮ್ಯಾಪಿಂಗ್ ಮಾಡಿಸಿಕೆಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಬಿಜಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.