26 C
Hubli
ಏಪ್ರಿಲ್ 20, 2024
eNews Land
ಕೃಷಿ ತಂತ್ರಜ್ಞಾನ ದೇಶ

ಪದ್ಮಶ್ರೀ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ: ಕೃಷಿ ವಿಜ್ಞಾನಿ ಎ.ಆಯ್.ನಡಕಟ್ಟಿನ

ಇಎನ್ಎಲ್ ಅಣ್ಣಿಗೇರಿ: ಕೇಂದ್ರ ಸರ್ಕಾರದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಹಾಗೂ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ, ಪಟ್ಟಣದ ಕೃಷಿಕನ ಮಗ ಎ.ಆಯ್.ನಡಕಟ್ಟಿನ ವಿಶ್ವಶಾಂತಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸಿ, ಕೃಷಿ ಕ್ಷೇತ್ರದಲ್ಲಿ ರೈತರ ಕೃಷಿ ಚಟುವಟಿಕೆಗೆ ಉಪಯುಕ್ತವಾಗುವ ಕೃಷಿ ಉಪಕರಣಗಳನ್ನು ತಯಾರಿಸಿ, ಕಳೆದ 40 ವರ್ಷಗಳಿಂದ ಕೃಷಿ ವಿಜ್ಞಾನಿಯಾಗಿ 16 ಕೃಷಿ ಉಪಕರಣಗಳನ್ನು ಸಂಶೋಧನೆ ಮಾಡಿದ್ದಾರೆ.

ನಾಡಿನ ರೈತಕುಲಕ್ಕೆ ನೀಡಿದ ಕೊಡುಗೆ ಪರಿಗಣಿಸಿ, ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿ, ಅಣ್ಣಿಗೇರಿ ಕೀರ್ತಿ ರಾಷ್ಟ್ರವ್ಯಾಪಿ ತಂದಿದ್ದಕ್ಕೆ ಪಟ್ಟಣದ  ರೈತಬಾಂಧವರು ಹರ್ಷವ್ಯಕ್ತಪಡಿಸಿದ್ದಾರೆ. ಮಠಾಧೀಶರು, ಗಣ್ಯಮಾನ್ಯರು, ಹಿತೈಷಿಗಳು, ಬಂಧು-ಬಳಗದವರು, ಶಿಕ್ಷಣ ಸಂಸ್ಥೆಗಳು, ಹಾಗೂ ಸಂಘ ಸಂಸ್ಥೆಗಳ ಮುಖಂಡರು, ಅಭಿಮಾನಿಗಳು, ರಾಜಕೀಯ ಮುಖಂಡರು, ಅಭಿನಂದಿಸಿದ್ದಾರೆ.

Related posts

ಮೆಣಸಿನ ಸಸಿ ಕಿತ್ತು ವಿಕೃತಿ ಮೆರೆದ ದುಷ್ಕರ್ಮಿಗಳು

eNEWS LAND Team

FIRST LADY OFFICER TO HEAD THE TRAINING BATTALION “THE MIGHTY CHETAK” OF ASC CENTRE(NORTH)

eNEWS LAND Team

ಸುಡಾನ್‌ನಲ್ಲಿ ಸೇನೆ ಹಾಗೂ ಅರೆಸೇನಾ ಪಡೆಗಳ ನಡುವಣ ಸಂಘರ್ಷ: ಕನ್ನಡಿಗರ ರಕ್ಷಣೆ ಮಾಡುವಂತೆ ಕಸಾಪ ಆಗ್ರಹ

eNEWS LAND Team