27 C
Hubli
ಮಾರ್ಚ್ 28, 2023
eNews Land
ಅಪರಾಧ ಕೃಷಿ

ಮೆಣಸಿನ ಸಸಿ ಕಿತ್ತು ವಿಕೃತಿ ಮೆರೆದ ದುಷ್ಕರ್ಮಿಗಳು

Listen to this article

 

ಅಣ್ಣಿಗೇರಿ:

ಪಟ್ಟಣದ ಮಜ್ಜಿಗುಡ್ಡ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಸಿಗುವ ರೈತ ದೊಡ್ಡಯ್ಯ ಕಾವಯ್ಯ ಹಿರೇಮಠ ಅವರ ಹೊಲದಲ್ಲಿ 5 ಗುಂಟೆಗಿಂತ ಹೆಚ್ಚಿನ ಪ್ರಮಾಣದ ಹೊಲದಲ್ಲಿ ಮೆಣಸಿನಕಾಯಿ ಸಸಿಗಳನ್ನು ಕಿತ್ತು ದುಷ್ಕರ್ಮಿಗಳು ಕಿತ್ತು ವಿಕೃತಿ ಮೆರೆದಿದ್ದಾರೆ.

ಎರಡು ಎಕರೆ 20 ಗುಂಟೆ ಹೊಲದಲ್ಲಿ ಮೆಣಸಿನಕಾಯಿ ಸಸಿಗಳನ್ನು ಕಿತ್ತೆಸೆದು ದುಷ್ಕರ್ಮಿಗಳು 1 ಕ್ವಿಂಟಲ್ ನಷ್ಟು ಬೆಳೆ ನಾಶ ಪಡಿಸಿದ್ದಾರೆ.

ಸಂಕಷ್ಟದಲ್ಲಿರುವ ರೈತರು ಸಾಲ ಮಾಡಿ ಬೆಳೆಸಿದ ಬೆಳೆ ಕೈಗೆ ಬರುವ ಹೊತ್ತಿನಲ್ಲಿ ದುಷ್ಕರ್ಮಿಗಳು ಈ ರೀತಿ ಬೆಳೆ ನಾಶ ಪಡಿಸುತ್ತಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ.

ಈ ತಕ್ಷಣವೇ ಅಣ್ಣಿಗೇರಿ ಪೊಲೀಸ್ ಠಾಣಾಧಿಕಾರಿಗಳು ಜಾಗೃತಿವಹಿಸಿ ರೈತರ ಹೊಲದಲ್ಲಿ ಬೆಳೆ ನಾಶಪಡಿಸುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಹಾಗೂ ತಪ್ಪಿತಸ್ಥರಿಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಟ್ಟಣದ ರೈತರು ಆಗ್ರಹಿಸಿದ್ದಾರೆ.

 

 

Related posts

ನವಲಗುಂದ: ಸಾಲಬಾಧೆಗೆ ಕೆರೆಗೆ ಹಾರಿ ರೈತ ಆತ್ಮಹತ್ಯೆ

eNewsLand Team

ಹೆಬಸೂರು: ಚಿನ್ನಾಭರಣ, ನಗದು ಕದ್ದು ಪರಾರಿ

eNewsLand Team

ಲ್ಯಾಪ್‍ಟಾಪ್‍ ದೋಷ: ಸಿಕ್ತು ₹ 52 ಸಾವಿರ ಪರಿಹಾರ!!

eNewsLand Team