28 C
Hubli
ಸೆಪ್ಟೆಂಬರ್ 21, 2023
eNews Land
ಕೃಷಿ

ಕಡಲೆ ಖರೀದಿ ಕೇಂದ್ರ ತೆರೆಯಲು ಆಗ್ರಹ: ಪ್ರಕಾಶ ಅಂಗಡಿ

ಇಎನ್ಎಲ್ ಅಣ್ಣಿಗೇರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಕೇಂದ್ರ ತೆರೆಯುತ್ತೇವೆಂದು ಭರವಸೆ ನೀಡುತ್ತಿದ್ದಾವೆ ವಿನಹ: ರೈತರ ಬೆಳೆಗಳು ಬರುವ ಮುನ್ನವೇ ಖರೀದಿ ಕೇಂದ್ರ ತರೆಯುವುಲ್ಲಿ ವಿಫಲವಾಗಿವೆ.

ತಕ್ಷಣವೇ ಕಡಲೆ ಬೆಳೆ ಖರೀದಿ ಕೇಂದ್ರ ತೆರೆಯಬೇಕೆಂದು ಆಗ್ರಹಿಸಿ, ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ತಹಶೀಲ್ದಾರ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಿದರು. ಸದ್ಯ ಹಿಂಗಾರಿನ ಕಡಲೆ ಬೆಳೆ ಒಕ್ಕಲಿ ಮಾಡಿ ಖರೀದಿ ಕೇಂದ್ರವಿಲ್ಲದೇ ಖಾಸಗಿ ವ್ಯಾಪಾರಸ್ಥರಿಗೆ ರೈತರು ಆರ್ಥಿಕ ಸಂಕಷ್ಟದಲ್ಲಿ ಇರುವುದರಿoದ ಕಡಲೆ ಬೆಳೆ ಮಾರಾಟ ಮಾಡುತ್ತಿದ್ದರೂ ಕಡಲೆ ಖರೀದಿ ಕೇಂದ್ರ ತೆರೆದಿಲ್ಲ.

ಸರ್ಕಾರಕ್ಕೆ ಫೆ13 ತನಕ ರೈತರು ಖರೀದಿ ಕೇಂದ್ರ ತೆರೆಯಲು ಗಡವು ನೀಡಿದ್ದು, ಫೆ.14 ರಂದು ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯದಿದ್ದರೇ, ಅಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ರೈತ ಮುಖಂಡರಾದ ನಿಂಗಪ್ಪ ಬಡೇಪ್ಪನವರ, ಹನಮಂತಪ್ಪ ಕಂಬಳಿ, ಲಕ್ಷ್ಮಣ ಮುದುನಾಯ್ಕರ, ಎಮ್.ಎನ್.ಹೊನ್ನುರ, ಎನ್.ಎಚ್.ಸದರಬಾಯಿ, ದಾವಲಸಾಬ ವಿರಾಪುರ, ಎ.ಸಿ.ಮುಳಗುಂದ, ಬಸವರಾಜ ಹಾದಿಮನಿ, ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತ ಮುಖಂಡರು, ಜೆಡಿಎಸ್ ಪಕ್ಷದ ಮುಖಂಡರು ಸೇರಿದಂತೆ ಉಪಸ್ಥಿತರಿದ್ದರು.

Related posts

ರೈತರಿಗೆ ಆಸರೆಯಾದ ಪಿಎಂ ಫಸಲ ಬೀಮಾ ಯೋಜನೆ: ಕಟ್ಟೇಗೌಡರ

eNEWS LAND Team

ಬೆಳೆಹಾನಿ ಪರಿಹಾರಕ್ಕೆ ಆಗ್ರಹ : ಜಯರಾಜ ಹೂಗಾರ

eNEWS LAND Team

ಮುಂಗಾರು ಮಳೆ ಬೇಗ ಬರುತ್ತೆ ; ಹವಾಮಾನ ಇಲಾಖೆ

eNewsLand Team