eNews Land
ಕೃಷಿ

ಅತಿವೃಷ್ಟಿ ಮಳೆಗೆ ಹಾನಿಯಾದ ಬೆಳೆ ಹಾಗೂ ಮನೆ

Listen to this article
ಇಎನ್ಎಲ್ ಅಣ್ಣಿಗೇರಿ:  ತಾಲೂಕಿನಾದ್ಯಂತ ಬೆಳಗಿನ ಜಾವದಿಂದ ನಿರಂತರವಾಗಿ ಜಿಟಿ ಜಿಟಿ ಮಳೆ ನಿರಂತರವಾಗಿ ಇದೆ. ನ.11 ರಿಂದ ನ.19 ರವಗಿನ ಸಮೀಕ್ಷೆ ಪ್ರಕಾರ ಒಟ್ಟು 15 ಮನೆಗಳು ಬಿದ್ದಿವೆ. ತಾಲೂಕಿನ ಅಡ್ನೂರು, ಹಳ್ಳಿಕೇರಿ, ಸೈದಾಪೂರ, ಇಬ್ರಾಹಿಂಪೂರ, ಶಲವಡಿ, ನಾವಳ್ಳಿ, ತುಪ್ಪದಕುರಹಟ್ಟಿ, ಶಿಶ್ವಿನಹಳ್ಳಿ, ನಲವಡಿ, ಬೆನ್ನೂರು, ಕಿತ್ತೂರು, ಇನ್ನೀತರ ಗ್ರಾಮಗಳಲ್ಲಿ ಒಟ್ಟು 15 ಮಣ್ಣಿನ ಮನೆಗಳು ಕುಸಿದು ಬಿದ್ದಿವೆ. ಹವಾಮಾನ ವೈಪರಿತ್ಯದಿಂದ ಸದ್ಯ ಮಳೆಯಿಂದ ತಾಲೂಕಿನಲ್ಲಿ ಒಟ್ಟು 15 ಭಾಗಶಃ ಮನೆಗಳು ಬಿದ್ದು, ಅಂದಾಜು 10 ಲಕ್ಷ ರೂಗಳಷ್ಟು ನಷ್ಟವಾಗುವ ಸಂಭವವಿದೆ.  
ತಾಲೂಕಿನ 13,350 ಭೂಮಿ ಹೆಕ್ಟರ್ ಪ್ರದೇಶದಲ್ಲಿ ಕಡಲೆ,-5000 ಹೆಕ್ಟರ್, ಕುಸಬಿ-1000 ಹೆಕ್ಟರ್, ಜೋಳ-2350 ಹೆಕ್ಟರ್, ಹತ್ತಿ-5000 ಹೆಕ್ಟರ್,ಭೂಮಿಯಲ್ಲಿ ರೈತರು ಬಿತ್ತನೆಮಾಡಿದ್ದಾರೆ,ಕಡಲೆ ಬೆಳೆ ಮಳೆಯಿಂದ ತಗ್ಗು ಪ್ರದೇಶದಲ್ಲಿ ನೀರು ನಿಂತು ಮಣ್ಣಿನ ತೇವಾಂಶ ಹೆಚ್ಚಾಗಿ ಬೇರು ಕೊಳೆತು ಬೇರು ಕೊಳೆ ರೋಗ ಸಂಭವ ಹೆಚ್ಚಿದೆ. ನಿರಂತರ ಇನ್ನೊಂದು ವಾರ ಮಳೆ ಸಂಭವಿಸಿದರೇ ಹತ್ತಿ ಬೆಳೆ ಬೀಜ ಮೊಳಕೆ ಒಡೆದು ಚಿಗುರೊಡೆಯುವ ಸಂಭವ ಹೆಚ್ಚಿದೆ. ಒಟ್ಟಾರೆಯಾಗಿ 1750 ಹೆಕ್ಟರ್ ಭೂಮಿಯಲ್ಲಿ ಹಿಂಗಾರಿ ಬಿತ್ತನೆ ಬೆಳೆಗಳಲ್ಲಿ ಶೇ25 ರಷ್ಟು ಬೆಳೆಹಾನಿ ಆಗುವ ಸಂಭವ ಹೆಚ್ಚಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎ.ಎಸ್.ಪಾಟೀಲ ಹೇಳಿದರು.
    ತಾಲೂಕಿನ ತೋಟಗಾರಿಕೆ ಬೆಳೆಗಳ ಒಟ್ಟು 3650 ಹೆಕ್ಟರ್ ಬಿತ್ತನೆ ಕ್ಷೇತ್ರದಲ್ಲಿ ಮೆಣಸಿನಕಾಯಿ, ಉಳ್ಳಾಗಡ್ಡಿ, ಕಾಯಿಪಲ್ಲೆ ಬೆಳೆಗಳು ಬೆಳೆಯುತ್ತಿದ್ದು, ಮೆಣಸಿನಕಾಯಿ,ಬೆಳೆ ಕಡಿಮೆ ಇಳುವರಿ ಬರುವ ಸಂಭವ ಹೆಚ್ಚಿದೆ. ಸತತ ಮಳೆ ಪ್ರಮಾಣ ಹೆಚ್ಚಾಗುವುದರಿಂದ ಮೆಣಸಿನಕಾಯಿಯಲ್ಲಿ  ನೀರು ಹೊಕ್ಕು ಕಾಯಿ ಕೊಳೆತು ಹಣ್ಣು ಕೊಳೆ ರೋಗ (ಅಂತ್ರೋಝೋಕ) ಭಾದಿಸುತ್ತಿದೆ.  ಈ ಹಿನ್ನಲೆಯಲ್ಲಿ 330 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯ ಮೆಣಸಿನಕಾಯಿ ಬೆಳೆ, ಹಾಗೂ 50 ಹೆಕ್ಟರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬೆಳೆ ನಷ್ಟವಾಗುವ ಸಂಭವವಿದೆ.ಒಟ್ಟು ಶೇ 20 ರಷ್ಟ ಬೆಳೆ ಹಾನಿ ಆಗುವ ಸಂಭವವಿದೆ. ಎಂದು ತೋಟಗಾರಿಕಗೆ ಇಲಾಖೆ ಅಧಿಕಾರಿಗಳಾದ ಸಂಜಯ ದೊಡ್ಡಮನಿ ತಿಳಿಸಿದರು.

Related posts

ಮೆಣಸಿನ ಸಸಿ ಕಿತ್ತು ವಿಕೃತಿ ಮೆರೆದ ದುಷ್ಕರ್ಮಿಗಳು

eNEWS LAND Team

ಮೂವರು ಶ್ರೀಗಳಿಂದ ಭೂಮಿ ತಾಯಿಗೆ ಚರಗ !!

eNEWS LAND Team

ಕೊರೋನಾ ಕಲಿಸಿದ ಪಾಠ; ಕಲಘಟಗಿ ರೈತನೇ ವ್ಯಾಪಾರಿಯಾದ ಮಾದರಿ ಕಥೆಯಿದು!!

eNewsLand Team