ಇಎನ್ಎಲ್ ಅಣ್ಣಿಗೇರಿ: ಪಕೃತಿಯ ವಾಯುಭಾರ ಕುಸಿತದಿಂದ ಹವಾಮಾನ ವೈಪಿರಿತ್ಯದಿಂದ ಸತತವಾಗಿ ಸುರಿದ ಅತಿವೃಷ್ಠಿ ಮಳೆಗೆ ತಾಲೂಕಿನಲ್ಲಿ ಬೆಳೆದ ಮುಂಗಾರು ಹಾಗೂ ಹಿಂಗಾರಿನ ಬಿತ್ತನೆಯ ಕಡಲೆ, ಜೋಳ, ಗೋಧಿ, ಗೋವಿನಜೋಳ, ಹತ್ತಿ, ಮೇಣಸಿನಕಾಯಿ, ಉಳ್ಳಾಗಡ್ಡಿ, ಬೆಳೆಗಳು ನಾಶವಾಗಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ಒದಗಿದೆ. ತಕ್ಷಣವೇ ಸರ್ಕಾರ ರೈತರಿಗೆ ಬೆಳೆಹಾನಿ ಪರಿಹಾರ ನೀಡಬೇಕೆಂದು ಅಣ್ಣಿಗೇರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಜಯರಾಜ ಹೂಗಾರ ಆಗ್ರಹಿಸಿದ್ದಾರೆ.
ಬೆಳೆದ ಫಸಲುಗಳು ಇಳುವರಿ ಕಡಿಮೆಯಾಗಿದ್ದು, ಬ್ಯಾಂಕ್ ಹಾಗೂ ಖಾಸಗಿ ಸಾಲ ಮಾಡಿ, ಬೀಜ,ಗೊಬ್ಬರ, ಕ್ರಿಮನಾಶಕ, ಆಳು-ಕಾಳುಗಳು, ಖರ್ಚು ವೆಚ್ಚಕ್ಕೆ ವಿನಿಯೋಗಿಸಿದ ಹಣ ಬಾರದೇ,ಕಷ್ಟಪಟ್ಟು ದುಡಿದ ಅನ್ನದಾತರ ಗೋಳು ಕೇಳುರ‍್ಯಾರು? ಸಾಲಬಾಧೆಯಿಂದ ನರುಳುತ್ತಿರುವ ರೈತರು ಹತಾಶರಾಗಿದ್ದು, ತಕ್ಷಣವೇ ಒಂದು ಹೆಕ್ಟರ್ ಭೂಮಿಗೆ ರೂ.3೦ ಸಾವಿರ ರೂಗಳಂತೆ ಪರಿಹಾರ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು.ಅತಿಸಣ್ಣ, ಸಣ್ಣ, ದೊಡ್ಡ ಹಿಡಿವಳಿದಾರರ ಜಮೀನುಗಳ ಬೆಳೆಗಳನ್ನು ಸಮೀಕ್ಷೆ ಮಾಡಿ, ತಾಲೂಕಿನಲ್ಲಿ ಹಾನಿಗೊಳಗಾದ ಬೆಳೆಗಳ ರೈತರಿಗೆ ಪರಿಹಾರ ನೀಡಬೇಕು. ಹಾಗೂ 2019-20 ನೇ ಸಾಲಿನ ಬೆಳೆವಿಮೆ ಹಣ ಬಹಳಷ್ಟು ರೈತರ ಖಾತೆಗೆ ಜಮಾ ಆಗಿಲ್ಲ. ತಕ್ಷಣವೇ ಜಮಾ ಮಾಡಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
next post